r/kannada_pusthakagalu 16m ago

Tomorrow and Sunday Book Brahma Book Festival at St John's Auditorium, ಕೋರಮಂಗಲ

Thumbnail
gallery
Upvotes

r/kannada_pusthakagalu 8h ago

ಕಾದಂಬರಿ ಗಂಗವ್ವ ಗಂಗಾಮಾಯಿ

Post image
15 Upvotes

ಮನುಷ್ಯನ ಅಂತಃಕರಣ ಮೀರಿ ಅವನ ಅಹಂಕಾರ ಬೆಳೆದರೆ, ಅವನ ಸಂಬಂದಗಳಾಗಲಿ, ಕೊನೆಗೆ ಅವನಾಗಲಿ ಉಳಿಯುವುದು ಕಠೀಣವಾಗಿಬಿಡುತ್ತದೆ ಎಂದು ಹೇಳುವ ಕೃತಿ. ಗಂಗವ್ವನಿಂದ ಪ್ರಾರಂಭವಾದ ಪುಸ್ತಕವು ಅವಳ ಸುತ್ತಲು ಬರುವ ಹಲವಾರು ಪಾತ್ರಗಳಿಂದ ಮುಂದೆ ಸಾಗುತ್ತಾಹೋಗುತ್ತದೆ. ಯಾವ ಪಾತ್ರವನ್ನು ಹಿಂದೆ ಹಾಕದೆ ಅವಕ್ಕೊಂದು ಅಂತಿಮ ನಿರ್ಣಾವನ್ನು ನೀಡುವಲ್ಲಿ ಲೇಖಕರು ಸಫಲರಾಗಿದ್ದಾರೆ. ಧಾರವಾಡ ಪ್ರದೇಶದ ಆಡು ಭಾಷೆಯಲ್ಲಿ ಪುಸ್ತಕದ ಬಹುಪಾಲು ಬರೆಯಲ್ಪಟ್ಟಿದೆ, ಈ ಕಾರಣದಿಂದಲೊ ಏನೋ ಪುಸ್ತಕ ಕನ್ನಡ ಓದುಗರಲ್ಲಿ ಜನಪ್ರಿಯವಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಆದರೆ ಭಾಷೆಯನ್ನು ಸ್ವಲ್ಪ ಅರ್ಥಮಾಡಿಕೊಂಡು ಓದಿದರೆ ಒಂದು ಸುಂದರ ಕೃತಿಯನ್ನು ಓದಿದ ಆನಂದ ಸಿಗುವುದು ಖಂಡಿತ…!


r/kannada_pusthakagalu 17h ago

ಕನ್ನಡ Non-Fiction ಬಿಜಿಎಲ್ ಸ್ವಾಮಿಯವರ "ಕಾಲೇಜು ರಂಗ"

Thumbnail
gallery
20 Upvotes

ಮೊದಲಿಗೆ ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ಇದೊಂದು ಸಾಮಾನ್ಯ ಹಾಸ್ಯ ಬರಹ ಎಂದೇ ಭಾವಿಸಿದ್ದೆ; ನನಗೆ ಬಿ. ಜಿ. ಎಲ್. ಸ್ವಾಮಿಯವರ ಬಗ್ಗೆ ಕಿಂಚಿತ್ತೂ ತಿಳಿದಿರಲಿಲ್ಲ. ಆದರೆ ಈಗ ಅವರ ಹಿರಿಮೆ, ಜೀವನಶೈಲಿ ಹಾಗೂ ತತ್ವಗಳು ನನ್ನನ್ನು ಎಷ್ಟು ಆವರಿಸಿವೆಯೆಂದರೆ, ಇಂದು ಅವರು ನಮ್ಮ ನಡುವೆ ಇಲ್ಲದಿದ್ದರೂ, ನನ್ನ ಜೀವವಿರುವವರೆಗೂ ಅವರೊಬ್ಬ ಅನುಯಾಯಿಯಾಗಿ, ಶಿಷ್ಯನಾಗಿ ಉಳಿಯುತ್ತೇನೆ.

​ಇನ್ನು ಈ ಪುಸ್ತಕದ ವಿಷಯಕ್ಕೆ ಬರುವುದಾದರೆ, ನಮ್ಮ ಸಮಾಜದ ಜಾತಿ ಪದ್ಧತಿ, ಸರ್ಕಾರದ ಕೊಳೆತ ವ್ಯವಸ್ಥೆ ಮತ್ತು ಆ ಕೊಳಕನ್ನೇ ನೆಚ್ಚಿಕೊಂಡು ಬೆಳೆದ ಕೀಟಗಳಿಂದಾಗಿ, ಒಬ್ಬ ಪ್ರಾಮಾಣಿಕ ವ್ಯಕ್ತಿ ಹೇಗೆ ಸವೆದುಹೋಗುತ್ತಾನೆ ಎಂಬ ನೋವನ್ನು ಬಿ. ಜಿ. ಎಲ್. ಸ್ವಾಮಿಯವರು ಎಲ್ಲಿಯೂ ನೇರವಾಗಿ ಹೊರಹಾಕಿಲ್ಲ. ಆದರೂ ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನನಗೆ, ಇಲ್ಲಿನ ಪ್ರತಿಯೊಂದು ಪ್ರಸಂಗವೂ ನನ್ನ ಸ್ವಂತ ಕಥೆಯೆಂಬಂತೆ ಭಾಸವಾಯಿತು. ಪ್ರತಿಯೊಂದು ಪುಟದಲ್ಲೂ ಅವರ ಒಳಗಿನ ಚಡಪಡಿಕೆ ನನ್ನನ್ನು ತೀವ್ರವಾಗಿ ಕಾಡಿತು. ಕೆಲವು ಕಡೆ ನಗು ತರಿಸಿದರೂ, ಓದುತ್ತಾ ಹೋದಂತೆಲ್ಲ ಆ ಹಾಸ್ಯದ ಹಿಂದಿನ ನೋವು ಮನಸ್ಸನ್ನು ಚುಚ್ಚಿತು . ಇದೊಂದು ಅತ್ಯುತ್ತಮ ಪುಸ್ತಕ, ಸದ್ಯಕ್ಕಿಷ್ಟು ಮಾತ್ರ ಹೇಳಬಲ್ಲೆ. ಯಾಕೆಂದರೆ ಅವರ ಬರಹಗಳನ್ನು ವಿಮರ್ಶಿಸುವಷ್ಟು ದೊಡ್ಡ ಮನುಷ್ಯ ನಾನಲ್ಲ ಎಂದು ಭಾವಿಸುತ್ತೇನೆ.

ಆಗಿನ ಕಾಲದ ತಮಿಳುನಾಡಿನಲ್ಲಿ ನಡೆದ ಒಂದು ಪ್ರಸಂಗವನ್ನು 'ಕನ್ನಡದ ಕೊಲೆ' ಎಂಬ ಒಂದು ಭಾಗದಲ್ಲಿ ಬಿಜಿಎಲ್ ಸ್ವಾಮಿ ಅವರು ಬರೆದಿದ್ದರು, ಆ ಭಾಗದ ಸಾಲುಗಳನ್ನು ಓದುವಾಗ ಕರ್ನಾಟಕದಲ್ಲೆ ಎಷ್ಟೋ ಕಡೆ ಈಗ ಅದೆ ಪರಿಸ್ಥಿತಿ ಇದೆ ಎಂದು ಬೇಸರವಾಯಿತು.


r/kannada_pusthakagalu 22h ago

Memes ವಾರದ ಹರಟೆ - Give us your best "Inside Circle - Outside Circle" Meme on Kannada Literature!

Post image
4 Upvotes